google788439879b616bdb.html
top of page

ಪುಟ ಮೂರು: ತಿರುಗಾಟದ ಜೀವನ


ನಾನು ದೃಶ್ಯ ತಂಡ ಸೇರಿ ಸುಮಾರು 8-9 ತಿಂಗಳು ಕಳೆದಿದೆ. ಈ ಅವಧಿಯಲ್ಲಿ ನನ್ನೋಳಗಿನ ನಟನಿಗೆ 3 ನಾಟಕ ಹಾಗು 12 ಶೋಗಳಷ್ಟು ವಯಸ್ಸಾಗಿದೆ.

ರಕ್ತ – ಧ್ವಜ ನನ್ನ ಮನಸಿಗೆ ತುಂಬ ಹತ್ತಿರವಾದ ನಾಟಕ, ಈ ನಾಟ್ಕಕ್ಕೆ ರಂಗದ ಹಿಂದೆ ನೆಡೆದ ಕೆಲಸಗಳು ಹೇಳಲಸಾಧ್ಯ. ಅಚಾನಕ್ ಆಗಿ ನಾಟಕ ತಯಾರ್ ಆಗ್ಬೇಕು ಸ್ವತಂತ್ರದ 75 ನೆ ಅಮೃತ ಮಹೋತ್ಸವಕ್ಕೆ ಈ ನಾಟಕದ ಪ್ರದರ್ಶನ ಆಗಬೇಕು ಎಂದು ಶುರುಮಾಡಿದ ನಾವುಗಳು ನಟನೆಯಲ್ಲಿ ಎಳೆ ಕೂಸು ಆಗ. ನಮ್ಮನ ತಿದ್ದಿ ತೀಡಿ ಸ್ಕ್ರಿಪ್ಟ್ ಇಂದ ಹಿಡಿದು ಪ್ರಚಾರದವರೆಗೆ ಎಲ್ಲಾ ವಿಭಾಗಗಳಲ್ಲಿ ಕೆಲಸ ಮಾಡುವ ಅವಕಾಶ ನೀಡಿದ ದಾಕ್ಷಾಯಣಿ ಮಾಮ್ ತಾಳ್ಮೆ ನಿಜಕ್ಕೂ ಶ್ಲಾಗನಿಯ. ಹೀಗೆ ನಾಟಕವೇನೋ ತಯಾರಾಗಿ ಒಂದೆರಡು ಶೋಗಳು ಆದವು.

ಆನಂತರ ಹೊಸದೊಂದು ಪ್ರೊಡಕ್ಷನ್ ಶುರುವಾಯ್ತು, ಆ ಪ್ರೊಡಕ್ಷನ್ ಯಶಸ್ವಿ ಗೊಳಿಸುವ ಭರದಲ್ಲಿ ರಕ್ತ – ಧ್ವಜಕ್ಕೆ ಶೋಗಳ ಬೇಡಿಕೆ ಇದ್ದರೂ ಅದನ್ನು ಮುಂದೂಡಲಾಯ್ತು. ಹೊಸ ಪ್ರೊಡಕ್ಷನ್ ಎಂಬ ಖುಷಿ ಒಂದು ಕಡೆಯಾದರೆ ಮನ ತಟ್ಟಿದ ನಾಟಕದ ಶೋಗಳು ಬೇಗ ಆಗಲಿ ಎಂಬ ತುಡಿತ ಇನ್ನೊಂದು ಕಡೆ. ಆ ದಿನಗಳಲ್ಲಿ ನನಗೆ ನಾನೇ ನಮ್ಮ ಒಂದು ರಂಗಗೀತೆ “ ಬಂಡಿಯ ದಾರಿ ಸಾಗಲಿ, ನಮ್ಮ ಊರನು ಬೇಗ ಸೇರಲ್ಲಿ” ಎಂಬ ಸಾಲುಗಳನ್ನ ಬದಲಾಯಿಸಿಕೊಂಡು “ ಶೋಗಳು ಬೇಗ ಆಗಲಿ, ನಮ್ಮ ನಾಟ್ಕವು ಬೇಗ ಬೆಳೆಯಲ್ಲಿ, ನಮ್ಮ ನಾಟ್ಕವು ಬೇಗ ಬೆಳೆಯಲ್ಲಿ “ ಎಂದು ಗುನುಗುತ್ತಿದ್ದೆ.

ಉದ್ವಸ್ಥ ನಾಟಕ ತಯಾರಾಯ್ತು ಹಾಗೆ ಮೇಲಿಂದ ಮೇಲೆ ಶೋಗಳ ಓಟವು ಶುರುವಾಯ್ತು. ಮಾರ್ಚ್ ಒಂದೇ ತಿಂಗಳಿನಲ್ಲೇ ನಾವು 5 ಶೋ ಅದು ಬೇರೆ ಬೇರೆ ಊರುಗಳಲ್ಲಿ ನೀಡಿದೆವು. ಶೋಗಳ ಪೂರ್ವ ತಯಾರಿಯಂತು ಬಹಳ ಶಿಸ್ತಿನದು. ನಾನು ನನ್ನ ಕಾಲೇಜಿಗೂ ಇಷ್ಟು ಶಿಸ್ತಿನಿಂದ ಹೋಗುತ್ತಿರಲಿಲ್ಲ. ಈ ತಿರುಗಾಟ ಹೊಸ ಜನ, ಹೊಸ ಊರು, ಅಲ್ಲಿನ ತಿನಿಸುಗಳ ಪರಿಚಯ ನನ್ನಗೆ ಹಲವಾರು ವಿಷಯಗಳನ್ನು ಹೇಳಿಕೊಟ್ಟಿವೆ. ಶಿಸ್ತು, ಜವಾಬ್ದಾರಿ, ಸಮಯ ಪ್ರಜ್ಞೆ, ಹರ್ಷ, ಸಂಕಟ ಕೊನೆಯದಾಗಿ ಸಂತೃಪ್ತಿ. ಹಾ... ತೃಪ್ತನಾದೆಯೆಂದು ಬಂಡಿ ಇಲ್ಲಿಗೆ ನಿಂತಿಲ್ಲ ಹೊಸ ನಾಟಕದ ಹೊಸ ಹುಡುಕಾಟಗಳ ಜೊತೆ ಮುಂದೆ ಸಾಗುತ್ತಿದೆ.

- ಅಭಿಷೇಕ್ ಆರಾಧ್ಯ



2 comments

2 Comments


Chandana Padmaraj
Chandana Padmaraj
Apr 29, 2022

👏👏

Like

Like
bottom of page