google788439879b616bdb.html
top of page

ಪುಟ ಎರಡು: ಉದ್ವಸ್ಥಾವಸ್ಥ


"ಜಗವೇ ನಾಟಕ ರಂಗ"

ಅಂತ ಕವಿ ನುಡಿದ, ರಸಿಕ ಓದಿದ, ಕಲಾವಿದ ಅನುಬೊಗಿಸ್ದ. ನನ್ ಕತೇನೂ ಹಿಂಗೆ ಆಯ್ತು ನೋಡಿ.


“ಇಣುಕಿ ನೋಡಿರೆ ಎಲ್ಲವೂ ಖಾಲಿ ಖಾಲಿ”


ಜೀವನದಲ್ಲಿ ಒಂದು ಕೆಟ್ಟ ಗಳಿಗೆ, ಮಾನಸಿಕವಾಗಿ ಸ್ವಲ್ಪ ಕುಗ್ಗಿಹೋಗಿದ್ದೆ. ಹೀಗೆ ಮೇಡಂಗೆ ಅಕಾಲಿಕವಾಗಿ ಹರಟಕ್ಕೆ ಅಂತ ಕರೆ ಹಚ್ಚಿದೆ,

“ಹೇಳಪ್ಪ”

“ಹೀಗೊಂದು ಫಟನೆಯಾಯ್ತು ಮೇಡಂ, ಸ್ವಲ್ಪ ಆಫ್ ಆಗಿದ್ದೇನೆ”

“ಜೀವನಾನೇ ಅಷ್ಟು ಅಲ್ವೇನೋ? ಇಷ್ಟಕ್ಕೆಲ್ಲಾ ಕುಗ್ಗಿಹೋದರೆ ಹೆಂಗೆ ? ಒಂದು ಕೆಲಸ ಮಾಡು, ನಾಟಕ ಮಾಡ್ತಿಯಾ ? ಸಂಗೀತ ನಿರ್ವಹಣೆ ಮಾಡ್ಬೇಕಿದೆ, ನಿನಗೂ ಮನಸ್ಸು ಹಗುರಾಗುತ್ತೆ.”

“ಹಾ ಮೇಡಂ” ಹೀಗಂದು ಫೋನಿಟ್ಟವನೆ, ನವಚೇತನದಿಂದ ಡ್ಯೂಟಿ ಮುಗಸಿಕೊಂಡು ಹೊರಟೆ. 5 ಗಂಟೆಗೆ ಮನೆಬಿಟ್ಟ ನನಗೆ ಮುಂದಿನರ್ಧಘಂಟೆ ಕ್ಲಾಸಿನ ದಾರಿಯುದ್ದಕ್ಕೂ ಬೆಂಗಳೂರಿನ ಟ್ರಾಫಿಕ್ ತರಹ ಸವಿ ನೆನಪುಗಳ ಸುರಿಮಳೆ. ಮತ್ತೆ ರಂಗದ ಮೇಲೆ ನಿಲ್ಲುತ್ತೇನೆ ಎಂಬುದನ್ನ ಸ್ಮರಿಸಿದಾಗೆಲ್ಲಾ ಅದೇನೋ ಹೇಳಲಾಗದ ಸಂತಸ.

ರನ್ ಥ್ರೂಗು ಮುನ್ನ ಲ್ಯಾಪ್ ಟಾಪ್ ತೆಗೆದು ಹಾಡುಗಳನ್ನೆಲ್ಲಾ ಸಿದ್ಧಗೊಳಿಸುತ್ತಿರಲು ನಟಿಸುವ ಅವಕಾಶವೂ ಬಂತು.

“ಅರೆ! ಇದಪ್ಪ ಲಾಟರಿ” ಅಂತ ಖುಷಿಯಾಗಿ ಪಾತ್ರವನ್ನ ಸ್ವೀಕರಿಸಿದೆ. ಲಾಟರಿಯೊಟ್ಟಿಗೆ ಪ್ರದರ್ಶನಕ್ಕೂ ಹಿಂದಿನದಿನ ಹಿನ್ನಲೆಯಲ್ಲಿ ಹಾಡುವ ಅವಕಾಶವೂ ಒದಗಿಬಂತು!


“ಏನು ಅಮಿತಾ, ಲಡ್ಡು ಬಂದು ಬಾಯಿಗೆ ಬಿತ್ತಾ ?” - ನನ್ನ ಹೃದಯ.

“ಒಸಿ ತಡ್ಕೊಳಯ್ಯ” - ವಿಧಿ.


ಇಲ್ಲಿಂದ ರಂಗದ ಇಚ್ಛೆ ಅದೇನಿತ್ತೋ ಭಗವಂತನೇ ಬಲ್ಲ! ಪ್ರದರ್ಶನದ ದಿನ ಸಣ್ಣ ಸಣ್ಣ ವಿಷಯಗಳು ತಿಮಿಂಗಿಲದಂತೆ ನನ್ನನ್ನ ಕಾಡಲಾರಂಭಿಸಿತು… ಕೊನೆಗೆ, ರಂಗಮಂದಿರದಲ್ಲಿ ಕೂರಕ್ಕಂತ ಹಾಸಿದ್ದ ರಗ್ ರಂಗಮಂದಿರದ ಇತಿಹಾಸವನ್ನ ತನ್ನಲ್ಲಿದ್ದ ಕಸದ ಮೂಲಕ ನನಗೆ ತಿಳಿಸಲಾರಂಭಿಸಿತು.


“ಥತ್”


ನನ್ನ ಗಂಟಲು ಮೆತ್ತಗೆ ಕೆಡಲಾರಂಭಿಸಿತು. ಅದರ ಮೇಲೆ ಬ್ರಹ್ಮ ತಪಸ್ಸಿನಂತಿದ್ದ ನನ್ನ ಅತಿ ನಿರಳ ಕೇಸರಿ ಪಂಚೆ ಧರಿಸುವ ಕ್ವೇರಿಯೆ. ಪರಿಣಾಮವಾಗಿ ನನ್ನ ಶಾಂತಿ ಇನ್ನಷ್ಟು ಕೆಟ್ಟಿತು. ವಿಪರ್ಯಾಸವೆಂದರೆ, ನನ್ನ ಪಾತ್ರ ಸನ್ಯಾಸಿಯೋರ್ವನದ್ದು!

ಇಷ್ಟೆಲ್ಲಾ ಬೇಡದ ಭಾರ ತುಂಬಿಕೊಂಡು ಹೇಗೋ “ತರ್ಡ್ ಬೆಲ್” ವರಗೆ ಬಂದ್ವಿ. ಇಲ್ಲಿಂದ ಶುರುವಾದ ನನ್ನ ಅಪಶೃತಿಯ ಕಛೇರಿ ನಾಟಕದ ಬೆಳಗಾವಿಯಲ್ಲಲ್ಲದೇ ಬೆಂಗಳೂರಿನ ರಂಗಮಂದಿರದಲ್ಲಿದ್ದ ಅಷ್ಟೂ ಕಿವಿಗಳನ್ನ ಪಾವನಗೊಳಿಸಿತು. ಹೆಂಗೋ ನಾಟಕ ಮುಗಿಸಿ ಸಹ ಗಾಯಕನ, ಇತರೇ ಕಲಾವಿದರ ಕ್ಷಮೆಯಾಚಿಸುತ್ತಿರುವಾಗ, ಅವರು “ಏ ಪ್ರದರ್ಶನ ಅಂದಮೇಲೆ ಆಗತ್ತೆ ಬಿಡ್ರೀ” ಅಂತಂದು ನನ್ನ ಭಾರವನ್ನ ಇಳಿಸಿದ್ರು.

ಹೀಗೆ ನಾಟಕ ಏಳು ಕೀಳುಗಳ ಪಾಠವನ್ನ ನಾಟಕದಲ್ಲೇ ಹಾಗು ನಾಟಕದೊಟ್ಟಿಗೆ ಕಲಿಸಿದ್ದು ನಿಜಕ್ಕೂ ವಿಶೇಷವೇ ಸರಿ “ಫುಲ್

ಸ್ಟಾಪ್”


⁃ ಅಮಿತ್ ಆರ್ ಬಿ, ದೃಶ್ಯ.


Comments


bottom of page