ಪ್ರಸಂಗ 6 : "ಕಟ್ಟಿಗೆ ಕುದುರೆಯ ಆರಂಭದೋಟ."
- Chandan Kulkarni
- Oct 17, 2020
- 1 min read

ನನ್ನ ಜೀವನದ ಮೊದಲನೇ ನಾಟಕ, Shakespeare ಅವರ "Twelfth night". ಸೈನಿಕ 'Valentine', ಅದರಲ್ಲಿನ ನನ್ನ ಪಾತ್ರ. ಮೊದಲ ದೃಶ್ಯ ದಲ್ಲೆನೋ ಕೊಟ್ಟಿರೊ Dialogue ನ್ನ ಹಾಗೆ ಹೇಳಿ ಮುಗಿಸ್ದೆ, ಮುಗಿಸಿದ ಗುಂಗಲ್ಲೆ ಹಾಗೆ ಬಂದು wing ಪಕ್ಕದಲ್ಲಿ ಕುಳಿತೆ. " ಯಾರಲ್ಲಿ... ಯಾರಲ್ಲಿ..." ರಾಜ ಒಂದೆ ಸಮನೆ ಬೊಬ್ಬೆ ಹೊಡಿತಾ ನನ್ನ ಕರೀತಾ ಇದ್ರೂ ನನ್ನ ಗಮನಕ್ಕೆ ಬರಲೇ ಇಲ್ಲ, ನಾನು ಹೊಗಲೇ ಇಲ್ಲ.
ನಾಟಕ ನೋಡೋ ಗುಂಗಲ್ಲೇ ಮಗ್ನನಾಗಿ ಕುಳಿತಿದ್ದೆನೊ... ಅಥವಾ ಪುಟ್ಟ ಪಾತ್ರ, ಸರಳ ಪಾತ್ರ ನನ್ನದು ಅಂತ, ನಾಟಕದ ಓಟದಲ್ಲಿ ಭಾಗಿಯಾಗಲೇ ಇಲ್ವೊ... ಆ ಸಮಯದಲ್ಲಿ ತುಂಬಾ ಕಾಡಿದಂತಹ ಪ್ರಶ್ನೆಗಳಿವು. ನಾನು ಹೋಗ್ಲಿಲ್ಲ, ಯಾರೂ ಈ ತಪ್ಪನ್ನ ಅಷ್ಟೊಂದು ಗಮನಿಸ್ಲೂ ಇಲ್ಲ. ಆದರೆ, ಇದು ನಾನು ಯೋಚಿಸೊ ದೃಷ್ಟಿಕೋನವನ್ನ ಬದಲಾಯಿಸಿದಂತಹ ಪುಟ್ಟ ಚಿಂತನೆ ಕೂಡ ಹೌದು. "ಬರೀ ಪಾತ್ರ ನನ್ನದಲ್ಲ, ಇಡೀ ನಾಟಕವೇ ನನ್ನದು" ಅನ್ನೊ ಸೂಕ್ಷ್ಮ ವಿಚಾರವನ್ನ ತಿಳಿಸಿದ ಚಿಂತನೆ.
ಅಂದಿನಿಂದ ದೃಶ್ಯ ತಂಡದ ಅನಂತ ಓಟದಲ್ಲಿ ನಾನೂ ಸಹಭಾಗಿಯಾದೆ, ಹೆಜ್ಜೆಹೆಜ್ಜೆಗೂ ಜೀವನದ ಹಲವಾರು ಪಾಠಗಳನ್ನ ಕಲೀತಾ ಬಂದೆ. ಕಾಲೂರಿ ನಿಂತಂಥ ಕಟ್ಟಿಗೆಯ ಕುದುರೆಗೆ ಜೀವಭಾವ ತಂದಿತ್ತ ಸುಮಧುರ ಕ್ಷಣಗಳವು, ಏನಾದ್ರೂ ಸಮಯಯಾತ್ರೆ ಸಂಭವನೀಯವಾಗಿದ್ರೆ, ನಾನು ಅದೇ ದಿನಗಳನ್ನ ಮತ್ತೆ ಜೀವಿಸಲು ಆಶಿಸುತ್ತೆನೆ
"ಮರಳಿ ಮರಳಿ ಮೆಲ್ಲನೆ ಹೊರಳಿ,
ನೆನೆಯುತಿತ್ತ ಮನ ತೆರಳಿ ನಿನ್ನೆಗೆ... ತೆರಳಿ ನಿನ್ನೆಗೆ..."
- ಚಂದನ್ ಕುಲಕರ್ಣಿ

Chandan Kulkarni, Has been a part of Dhrushya since 2015 and has contributed to Dhrushya ever since.
He is also an much appreciated writer and sketch artist.
Art by Sammruddhi Gowda. Click here to check out her art
Comments