google788439879b616bdb.html
top of page

ಪ್ರಸಂಗ 12: " ದೃಶ್ಯದೊಂದಿಗಿನ ಒಡನಾಟ."

ನಾನು ದೃಶ್ಯ ಕ್ಕೆ ಬರುವುದಕ್ಕೆ ಕಾರಣ ನನ್ನ ಫ್ರೆಂಡ್ ನ ಅಕ್ಕ ಆಶಾ. "ಇಂಟ್ರೆಸ್ಟ್ ಇದ್ರೆ ಹೋಗಿ ಜಾಯಿನ್ ಆಗು ನಾನ್ ರೆಫೆರ್ ಮಾಡ್ತಿನಿ" ಅಂದ್ರು ಅಂತ ಏನೋ ಒಂದ್ ಜೋಷ್ ನಲ್ಲಿ ಓಕೆ ಅಂದ್ಬಿಟ್ಟೆ.

ಅಕ್ಕ ಮೇಡಂ ನಂಬರ್ ಕೊಡ್ತಾರೆ , ನೆಕ್ಸ್ಟ್ ಡೇ ಕಾಲ್ ಮಾಡ್ತಿನಿ , ಬನ್ನಿ ಅಂತ ರೆಸ್ಪೋನ್ಡ್ ಮಾಡ್ತಾರೆ,

ಸರಿ ಇಷ್ಟೆಲ್ಲ ಆಯಿತು ಪಾರ್ಕ್ ಹತ್ರ ಹೋಗ್ತೀನೀ , ಮೇಡಂ ನ ನಾನು ನೋಡೇ ಇಲ್ಲ , ಹೇಗೆ ಕಂಡುಹಿಡಿಯೋದು ಅಂತ ಪ್ರಶ್ನೆ. ಸರಿ ಗೂಗಲ್ ಓಪನ್ ಮಾಡಿ , ದಾಕ್ಷಾಯಣಿ ಭಟ್ ಅಂತ ಸರ್ಚ್ ಮಾಡ್ತಿನಿ ಫೋಟೋ ಬರುತ್ತೆ, ಆದರೆ ನಂಗೆ ಡೌಟ್ 'ಇವ್ರೇನಾ!?' ಅಂತ , ಆಮೇಲೆ ಡೀಟೈಲ್ಸ್ ನೋಡಿದಾಗ ದೃಶ್ಯ ರನ್ ಮಾಡ್ತಾಇರೋದು ಅವರೇ ಅಂತ ಗೋತ್ತಾಗುತ್ತೆ . ಕ್ಲಾಸ್ಗೆ ಎಂಟ್ರಿ ಕೊಡ್ತೀನಿ. ನೋಡಿದ್ರೆ ಎಲ್ಲ ಕಡೆ ಹುಡ್ಗ ಹುಡ್ಗೀರು ಓಡಾಡ್ತಿದ್ದಾರೆ ಮೇಡಂ ಕಾಣಿಸ್ತಿಲ್ಲ. ಮತ್ತೆ ಕಾಲ್ ಮಾಡ್ತಿನಿ ನೋಡಿದ್ರೆ ಮೇಡಂ ಹುಡುಗರ ಮಧ್ಯದಲ್ಲಿ ಇದ್ದಾರೆ!!!


ಮೇಡಂನ ಮಾತನಾಡಿಸಿದೆ , ಅವ್ರು ಹೇಳಿದ್ದು ಒಂದೇ "ಟೈಮ್". ಸರಿಯಾದ ಟೈಮ್ ಕೊಡಕ್ ಆಗುತ್ತಾದ್ರೆ ಬನ್ನಿ ಅಂತ . ನಾನು ಯಸ್ ಅಂದೆ ಇನ್ ಆದೆ .

ಮೊದಲ ದಿನ ವಿದೀಶೆಯ ವಿದೂಷಕ ಹೊಸ ನಾಟಕಕ್ಕೆ ಯಕ್ಷಗಾನ ಪ್ರಾಕ್ಟೀಸ್ ಶುರು ಮಾಡಿದ್ರು. ಯಕ್ಷಗಾನ ಪ್ರಾಕ್ಟೀಸ್ ಫೋರ್ಸ್ ಗೆ ನೆಕ್ಸ್ಟ್ ಡೇ ಆಫೀಸ್ ಸ್ಟೆಪ್ ಸಹ ಹತ್ತೋಕೆ ಆಗ್ತಾ ಇರ್ಲಿಲ್ಲ, ಆದರೆ ಕಲಿಯೋಕೆ ಬಂದಾಗ ನೋವನ್ನ ಮರಿಲೇಬೇಕು , ನೋವು ಪ್ರಾಕ್ಟೀಸ್ ಆಗುತ್ತೆ , ಕಲಿತೀವಿ ಅಂತ ಸಮಾಧಾನ ಮಾಡ್ಕೊಂಡೆ.

ಹೊಸ ನಾಟಕ ಶೋ ಕೂಡ ಆಗ್ಗುತ್ತೆ, ಅದರಲ್ಲಿ ನಂದು ಚಿಕ್ಕ ಪಾರ್ಟ್ ಕಂಚುಕಿ ಡೈಲಾಗ್ ಹೇಳಲು ಸಿಕಾಪಟ್ಟೆ ಒದ್ದಾಡ್ತಾಯಿದ್ದೆ , ಹೇಗೋ ಈ ನಾಟಕ ಮುಗಿದ್ರೆ ಸಾಕು ಹೋಗ್ಬಿಡೋಣ ಅಂತ ಮನಸ್ಸು ಮಾಡಿದ್ದೆ. ಆದರೆ ಒಮ್ಮೆ ಸ್ಟೇಜ್ ಹತ್ತಿದ ಮೇಲೆ ಸ್ವಲ್ಪ ಭಯ ಕಡಿಮೆ ಆಗಿ ಇನ್ನ ಚೆನ್ನಾಗಿ ಮಾಡೋಣ ಅಂತ ಡಿಸೈಡ್ ಮಾಡ್ದೆ .


ಹಾನುಷ್ ನಾಟಕ ಶುರುಮಾಡಿದ್ರು , ಹಾನುಷ್ ಈ ಮೊದಲೇ ಮಾಡಿದ್ದ ನಾಟಕ ಆದರು ನನಗದು ಹೊಸದಾಗಿತ್ತು , ಅದರಲ್ಲಿ ನನಗೆ ಪೊಲೀಸ್ ಅಧಿಕಾರಿ ಪಾತ್ರ. ಸರಿ ಭಯ ಹೋಗಿತ್ತಲ್ಲ ಅಂತ ಡೈಲಾಗ್ ಹೊಡಿಯೋಕೆ ಹೋಗ್ತೀನಿ ಅಲ್ಲಿ ಆಧಿಕಾರಿ ಬದಲು ಕಂಚುಕಿ ಬಂದ್ಬಿಡೋದೇ. ಹುಡುಗರು "ನೀನು ಅಧಿಕಾರಿಯಾಗಿ ಮಾಡ್ತಿಲ್ಲ ಕಂಚುಕಿ ಹಾಗೆ ಮಾಡ್ತಿದ್ಯ" ಅಂದ್ರು . "ನೀವು ಕಂಚುಕಿನ ನೋಡಿ ಅಭ್ಯಾಸ ಮಾಡ್ಕೋ ಬಿಟ್ಟಿದ್ದೀರಿ ಅದ್ಕೆ ನಿಮಗೆ ಅಧಿಕಾರಿ ಕಾಣಿಸ್ತಿಲ್ಲ" ಅಂತ ನಾನೂ ತಮಾಷೆ ಮಾಡ್ತಿದ್ದೆ. ಹೇಗೋ ಕಂಚುಕಿ ಜೊತೆ ಅಧಿಕಾರಿನು ಕರ್ಕೊಂಡ್ ಹೋದೆ .


ಹಾನುಷ್ ನ ನಂತರ ಮತ್ತೆ ವಿದೀಶೆಯ ವಿದೂಷಕ ನಾಟಕ ಶುರುವಾಯ್ತು , ನಾನು ಮೈಂಡ್ ನಲ್ಲಿ ಫಿಕ್ಸ್ ಆಗುತ್ತೀನಿ, ಕಂಚುಕಿ ಪಾತ್ರನಾ ಚನ್ನಾಗಿ ಮಾಡಬೇಕು ಅಂತ, ಆದ್ರೆ ರೀಡಿಂಗ್ ಮಾಡ್ಬೇಕಾದ್ರೆ ಎಲ್ಲೋ ಒಂದ್ ಕಡೆ ಆಸೆ ಯಾವದಾದ್ರು ದೊಡ್ ಪಾತ್ರ ಕೊಟ್ರೆ ಮಾಡೋಣಾಂತ , ಅದೇರೀತಿ ಅಂದ್ಕೊಂಡಂಗೆ ಸ್ವಲ್ಪ ದೊಡ್ ಪಾತ್ರನೇ ಕೊಡ್ತಾರೆ , ಪಾತ್ರ ನಾಟ್ಯಾಚಾರ್ಯ. ಜೋಷ್ ನಲ್ಲಿ ಖುಷಿ ಆಗತ್ತೀನಿ, ಆದ್ರೆ ಅದ್ರಲ್ಲಿ ಸೇಮ್ ಪ್ರಾಬ್ಲಮ್ , ಪಾತ್ರನಾ ಹೇಗ್ ಕಟ್ಕೋಬೇಕು ಅಂತ , ಎಷ್ಟೋಬಾರಿ ರಿಹರ್ಸಲ್ ನಲ್ಲಿ ಸೈಕಲ್ ಹೊಡೆದದ್ದು ಉಂಟು , ಮೇಡಂ ನನ್ನ ಆಕ್ಟಿಂಗ್ ನೋಡಿ ಬೇಜಾರ್ ಆಗಿ ತಲೆ ಕೆಳಗೆ ಮಾಡಿದ್ದೂ ಉಂಟು . ನನಗಂತೂ ಭಯ ಮೊದ್ಲಿಗಿಂತ ಜಾಸ್ತಿನೇ ಇತ್ತು , ಹೇಗೋ ಆದಲ್ಲೂ ನಿಭಾಯಿಸುತ್ತೇನೆ , ಅದಾದ ನಂತರ ಬ್ಯಾಕ್ ಟು ಬ್ಯಾಕ್ ಶೋ ಆಗುತ್ತೆ, ಪಾತ್ರ ಹೊಂದ್ಕೊಳ್ತಾ ಹೋಗುತ್ತೆ .


ಇದ್ರೂ ಜೊತೆಗೆ ದೃಶ್ಯ ನಾಟಕೋತ್ಸವಕ್ಕೆ ಹಾನುಷ್ ಜೊತೆ ವಿಧೂಷಕ ನಾಟಕ , ಅಧಿಕಾರಿ ಬದ್ಲು ಜಾನ್ ಎಂಬ ಪಾತ್ರ ಸಿಗುತ್ತೆ , ಸೇಮ್ ಪ್ರಾಬ್ಲಮ್ ಏನೇ ಮಾಡಿದ್ರು ಜಾನ್ ಬರಲ್ಲ ನಾಟ್ಯಾಚಾರ್ಯ ಹೋಗಲ್ಲ . ನನ್ನ ಅದೃಷ್ಟನೋ ಏನೋ ಪಾರ್ಟ್ ಬರ್ತಿಲ್ಲ ಅಂತಾನೆ ಲಾಕ್ ಡೌನ್ ಆಗೋಯಿತು .


ಲಾಕ್ ಡೌನ್ ಅಲ್ಲೇ ಫ್ರೀ ಇದ್ದಾಗ ಪಾತ್ರದ ಬಗ್ಗೆ ಯೋಚ್ನೆ ಮಾಡೋವಾಗ , ನಾ ಮಾಡುತ್ತಿದ್ದ ತಪ್ಪೆಲ್ಲಾ ಅರಿವಾಗುತ್ತಾ ಹೋಯಿತು. ಲಾಕ್ ಡೌನ್ ನಂತರ ಜಾನ್ ಬಂದ, ಆದರೆ ನಾಟ್ಯಾಚಾರ್ಯನಿಗಾಗಿ ಕಾಯುತ್ತಿದ್ದೇನೆ.


- ದಿಲೀಪ ಬಿ


Dilip B joined Dhrushya in the year 2019 and has been contributing to the team both on and off stage ever since. Dilip B works as an accountant in a firm in Bengaluru.

Comments


bottom of page