google788439879b616bdb.html
top of page

ಪ್ರಸಂಗ 15: "ಆ ಪಾತ್ರ ಅರ್ಥ ಆಗಿ ನನ್ನೊಳಗೆ ಇಳಿದಾಗ ಮೈಯಲ್ಲಿ ರೋಮಾಂಚನ ಆಯಿತು."

ನಾಟಕ ಅಂದರೆ ಏನು? ಒಂದು ಪಾತ್ರದಲ್ಲಿ ಜೀವಿಸುವುದು ಹೇಗೆ ಅನ್ನೋದು ನಾನು ದೃಶ್ಯದಲ್ಲಿ ಕಲಿತ ಪಾಠ. ಮೊದಮೊದಲು ನಾಟಕ ಎಂದರೆ ನಾನು ನನ್ನ ಮನಸ್ಸಲ್ಲಿ ಅಂದುಕೊಂಡಿದ್ದೇನೆಂದರೆ ಒಂದು ಪಾತ್ರ ಇರುತ್ತೆ ಅದಕ್ಕೆ ನಾವು ಡೈಲಾಗ್ ಹೇಳ್ಬೇಕು, ಹಾಗೆ ಸ್ವಲ್ಪ ಮುಖದಲ್ಲಿ ಎಕ್ಸ್ಪ್ರೆಶನ್ ಕೊಡ್ಬೇಕು, ಚೆನ್ನಾಗಿ ಅಲಂಕಾರ ಮಾಡ್ಕೋಬೇಕು ಅನ್ನೋದು, ಇದೆಲ್ಲಾ ಮಾಡಿದರೆ ಒಂದು ನಾಟಕ, ನಾನೊಬ್ಬ ನಟಿ ಅಂದುಕೊಂಡೆ. ನನಗೆ ಶಾಲಾದಿನಗಳಲ್ಲಿ ಏಕಪಾತ್ರಭಿನಯ ಮಾಡೋದು ಹೇಳಿ ಕೊಟ್ಟಾಗ ನಾನು ಬರಿ ಎಕ್ಸ್ಪ್ರೆಶನ್ ಮತ್ತು ಜಾಗ ಬದಲಾವಣೆ ಮಾಡ್ತಿದ್ದೆ ಹೊರತು ನನ್ನಲ್ಲಿ ಅದರೊಳಗೆ ಆಳವಾಗಿ ಇಣುಕುವ ಹುಡುಕಾಟ,


ಮಾಡುವ ಭಾವನೆಗಳು ಬರುತ್ತಾ ಇರಲಿಲ್ಲ ಬಂದರೂ ಅದು ಅಳುವಿನ ಪಾತ್ರಕ್ಕೆ ಮಾತ್ರ. ಕಾಲೇಜಿನ ಮೆಟ್ಟಿಲೇರಿದಾಗ ನನ್ನಲ್ಲಿ ನಾನು ಅಭಿನಯ ಮಾಡಬೇಕು ಅದರಲ್ಲಿ ನನ್ನನ್ನು ನಾನು ತೋಡಗಿಸಿಕೊಳ್ಳಬೇಕು ಎಂಬ ತುಡಿತ ನನ್ನಲ್ಲಿ ಹೆಚ್ಚಾಗುತ್ತಾ ಹೋಯಿತು. ಆದರೆ ನನಗೆ ಒಂದು ಅಡಿಪಾಯ, ಅಂದರೆ ಮನೆ ಭದ್ರವಾಗಿ ನಿಲ್ಲಲು ಅಡಿಪಾಯ ಹೇಗೆ ಮುಖ್ಯವೋ ಹಾಗೆ ನನ್ನ ಒಳಗಿರುವ ಆಸಕ್ತಿ ಮತ್ತು ನನ್ನನ್ನು ನಾನು ಕಂಡುಕೊಳ್ಳಲು ಮತ್ತು ಭದ್ರವಾಗಿ ನಿಲ್ಲಲು ಒಂದು ಅಡಿಪಾಯ ಬೇಕಿತ್ತು ಆ ಅಡಿಪಾಯವನ್ನು ದಾಕ್ಷಾಯಣಿ ಮ್ಯಾಮ್ ನನ್ನನ್ನು ಅವರ " ದೃಶ್ಯ ರಂಗತಂಡ " ಕುಟುಂಬಕ್ಕೆ ಸೇರಿಸಿಕೊಳ್ಳುವ ಮೂಲಕ ನನ್ನ ನಾಟಕದ ಜೀವನಕ್ಕೆ ಅಡಿಪಾಯ ಹಾಕಿದರು.



ಮ್ಯಾಮ್ ನಮಗೆ ಯಾವಾಗಲು ಹೇಳುತ್ತೀದ್ದರು " ನಾವು ಒಂದು ಪಾತ್ರವನ್ನು ಬರೀ ಪಾತ್ರವನ್ನಾಗಿ ನೋಡಬಾರದು, ಆ ಪಾತ್ರವನ್ನು ಜೀವಿಸಬೇಕು, ಅದರಲ್ಲಿ ಬರುವ ಎಲ್ಲಾ ಸನ್ನಿವೇಶಗಳು ನಮ್ಮ ಜೀವನದಲ್ಲಿ ಆದಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಅನ್ನೋದು ಕಾಣಿಸಬೇಕು, ಹುಡುಕಾಟ ಮಾಡಬೇಕು " ಎಂದು. ಆ ಪಾಠ ನನಗೆ ಅರಿವಾಗಿದ್ದು " ವಿಧಿಷೆಯ ವಿದೂಶಕ " ನಾಟಕದಲ್ಲಿ. ಆ ನಾಟಕವನ್ನು ಪ್ರತಿ ಬಾರಿ ನಾವು ಪ್ರಯೋಗ ಮಾಡುವಾಗಲು ಒಂದೊಂದು ಪಾಠವನ್ನು ಕಲಿತೆ . ಆಗ ನನ್ನ ಮೈಯಲ್ಲಿ ಒಂಥರಾ ಮಿಂಚು ಸುಳಿದ ಅನುಭವವಾಯಿತು ಅದು ಮಾತ್ರ ಮರೆಯಲಾಗದ್ದು. ಆಗ ನನಗೆ ತಿಳಿಯಿತು ಪಾತ್ರದಲ್ಲಿ ಜೀವಿಸುವುದು ಹೇಗೆ ಎಂದು. ಅದಲ್ಲದೆ ನಾಟಕದ ಬಗ್ಗೆ ಇದ್ದ ಭಾವನೆ ಕೂಡ ಬದಲಾಯಿಸುವಲ್ಲಿ ದೃಶ್ಯ ನನಗೆ ತುಂಬಾ ಸಹಕರಿಯಾಗಿದೆ. ನಾನು ಹೀಗೆ ಇಲ್ಲಿ ಜೀವನದ ಅತ್ಯಮೂಲ್ಯ ವಿಷಯಗಳನ್ನು ಕಲಿತಿದ್ದೇನೆ, ಹಾಗೂ ಇನ್ನು ತುಂಬಾ ವಿಷಯಗಳನ್ನು ಕಲಿತು ಒಬ್ಬ ಉತ್ತಮ ಜೀವಿ ಆಗಿ ಹೊರಬರಲು ಇಚ್ಛೆ ಪಡುತ್ತೇನೆ.


- ಈರಕ್ಕ ಸಿ ಲಮಾಣಿ



Erakka joined Dhrushya in 2019 and has been contributing to the team ever since. Currently, Erakka is pursuing her 2nd Year Bcom, in Government RC College of Commerce and Management.



















Comments


bottom of page