ಸಿದ್ದ ಬರಹ ಇದ್ದರೂ ನಾಟಕಏಳದ ಜಮಾನದಲ್ಲಿರುವಾಗ ನಾಟಕದ ತುದಿ ಬುಡ ತಿಳಿಯದೇ ಇರುವ ನವ ವಿದ್ಯಾರ್ಥಿಗಳನ್ನು ಸೇರಿಸಿ ತಾಳ್ಮೆಯಿಂದ ಕೂರಿಸಿ ಹಲವಾರು ಪುಸ್ತಕಗಳನ್ನು ಓದಿಸಿ ಅದರಿಂದ ನಾಟಕ ಕಟ್ಟುವುದು ಅಷ್ಟು ಸುಲಭದ ಮಾತಲ್ಲ, ಸದಾ ಪ್ರಯೋಗಶೀಲರಾಗಿ ಹೊಸ ಆಲೋಚನೆ ತರುವ ನಿರ್ದೇಶಕಿ ದಾಕ್ಷಾಯಣಿ ಮೇಡಂ ಇವರ ಹೊಸ ನಡೆ ಇದಾಗಿತ್ತು. ಭೀಕರ ಮಳೆ ಅದರ ಮಧ್ಯೆ ಸ್ವಾತಂತ್ರ ಕಿಚ್ಚು ಹುಟ್ಟಿಸುವ ಕಥೆ, ವಿಶೇಷವೇನೆಂದರೆ ತಲ್ಲೀನತೆಯ ನಡುವೆ ಅಂದಿನ ಆ ಮಳೆ ವಿದ್ಯಾರ್ಥಿಗಳ ನಾಟಕೋತ್ಸಾಹದ ಬೆಂಕಿಯ ಮುಂದೆ ತಣ್ಣಗಾಯಿತು. ಇಂದಿಗೂ ಕಾಡುವ ವಿಷಯವೇನೆಂದರೆ ಉತ್ತರದ ರಾಮಸಿಂಗ್ ಮತ್ತು ಮುಗ್ಧ ಕಿಶನ್ ನ ದೇಶ ಪ್ರೇಮ ಹಾಗೂ ದಕ್ಷಿಣ ದ ಈಸೂರು ದಂಗೆಯ ಸ್ವಾತಂತ್ರದ ಕಿಡಿ ಒಂದಕ್ಕೊಂದು ಇಷ್ಟು ಅರ್ಥಪೂರ್ಣವಾಗಿ ಬೇರೆತದ್ದೇ ಹುಬ್ಬೇರಿಸುವ ಸಂಗತಿ.
ಯಾವ ಜನ್ಮದ ಪುಣ್ಯವೋ ಏನೋ ನಮಗಾಗಿ ನಮ್ಮೆಲ್ಲರ ಉತ್ತಮ ಭವಿಷ್ಯಕ್ಕಾಗಿ ಅಂದು ಪ್ರಾಣ ಬಿಟ್ಟ ಹೋರಾಟಗಾರರ ದೇಶಪ್ರೇಮಕ್ಕೆ ಬೆಲೆಕಟ್ಟಲಸಾದ್ಯ. ಕೊನೆ ಪಕ್ಷ ಅವರ ಕಥೆಯನ್ನ ನಮ್ಮ ಮೂಲಕ ಜನರಿಗೆ ತಲುಪಿಸುವ ಅಳಿಲು ಸೇವೆಯ ಭಾಗ್ಯ ನಮ್ಮದಾಗಿದ್ದು ಪುಣ್ಯವೇ ಸರಿ.
- Nandan Kumar, Dhrushya
👌👌👏👏
👏👏👏
❤️
ಅದ್ಬುತ
💗✉✉💗✉✉💗