ಪ್ರಸಂಗ 3: "ಬಂಧನದಿಂದ ಬಾಂಧವ್ಯದೆಡೆಗೆ"
- Poornashree S
- Sep 27, 2020
- 1 min read

ಅವತ್ತು ಸಂಜೆ ಗಂಟೆ ಸುಮಾರು 4:30 ಇರಬಹುದು, ನಾವೆಲ್ಲರೂ ಕಾಯ್ತಿದ್ದ ಕೊನೆ ಥೇಟರ್ ಆಕ್ಟಿವಿಟಿ ಇನ್ನೇನು ಶುರು ಆಗಿತ್ತು. ಯಶ್ವಂತ್ ಶೆಟ್ಟಿ ಸರ್ ಒಂದು ಮೇಜಿನ ಮೇಲೆ ದಪ್ಪದಾದ ಒಂದು ಮೇಣದ ಬತ್ತಿ ಹತ್ತಿಸಿಡುತ್ತ ಹೇಳಿದ್ರು, "ಒಬ್ಬೊಬ್ಬರಾಗಿ ಬಂದು ಮೇಜಿನ ಮುಂದೆ ಇರೋ ಕುರ್ಚಿಲಿ ಕುಳಿತು ಈ ಬೆಳಕನ್ನೇ ದಿಟ್ಟಿಸಿ ನೋಡಿ. ಹಾಗೆ ನೋಡುತ್ತಿದ್ದಂತೆ ಎಲ್ಲವೂ ಕತ್ತಲಾಗಿ ಈ ಬೆಳಕು ಬಿಟ್ಟು ಬೇರೇನೂ ಕಾಣದಂಗೆ ಆಗುತ್ತೆ. ಆಗ ನೀವು ನಿಮ್ಮೊಳಗಿರೊ ಒಂದು ಮುಜುಗರವಾದ ಸಂಗತಿನೋ ಅಥವಾ ನೋವಿನ ಸಂಗತಿನೋ ಹಂಚಿಕೊಳ್ಳಿ" ಅಂತ.
ಆಗ ನನಗೆ ಏನೋ ಒಂತರ ತಳಮಳ. ಏನು ಹೇಳೋದು? ಹೆಂಗೆ ಹೇಳೋದು? ಅಷ್ಟೇಅಲ್ಲ್ದೆ, ಅಷ್ಟಾಗಿ ಗೊತ್ತಿಲ್ದೆ ಇರೋ ಸುಮಾರು 10-12 ಜನ ಬೇರೆ. ನಾನೋ, ಮೊದಲೇ introvert. ಇದೆಲ್ಲಾ ಬಿಟ್ಟು ನನ್ನಗೆ ಯೋಚ್ನೆ ಆಗಿದ್ದೆನ್ ಅಂದ್ರೆ, ಇಷ್ಟು ಬೆಳ್ಕಿರೋವಾಗ ಅದೆಂಗೆ ಕತ್ತಲಾಗುತ್ತೆ ಅಂತ!
ಅಂತು ಇಂತೂ ನನ್ ಸರದಿ ಬಂತು! ತಲೆಗೆ ಜಾಸ್ತಿ ಕೆಲ್ಸ ಕೊಡದೆ, ಮೇಜಿನ ಕಡೆ ಹೋದೆ.
1..2..3..4 ಸುಮಾರು 5 ಸೆಕೆಂಡ್ಗಿಂತ ಹೆಚ್ಚಾಗಿರಲಿಲ್ಲ, ಮೇಣದ ಬತ್ತಿನೂ ಕಾಣದಂಗೆ ಎಲ್ಲಾ ಕತ್ಲು! ಮೇಣದ ಬೆಳಕು ಪ್ರಕಾಶಮಾನವಾಗ್ತಾ ಬಂತು! ಆಮೇಲೆ ಕತೆ ಅದ್ ಹೇಗ್ ಶುರುವಾಯ್ತೋ ಯಾವಾಗ್ ಮುಗಿತೋ ಗೊತ್ತೇ ಆಗ್ಲಿಲ್ಲ. ಆದ್ರೆ ಇದಾದ್ಮೇಲೆ ನಾವು 10-12 ಜನ ಮೋದಲ್ನಂಗಿರ್ಲಿಲ್ಲ! ಎಲ್ಲರೂ ಹಳೇ ಸ್ನೇಹಿತ್ರು ತರ ಆದ್ವಿ. ನನ್ನ ದೃಶ್ಯ ದಿನಗಳ ಮೊದಲ ಹೆಜ್ಜೆ ಅದಾಗಿತ್ತು. ಮನಸ್ಸು ಬಿಚ್ಚಿ ನಟಿಸೋಕ್ಕೆ, ಮನಸ್ಸು ಬಿಚ್ಚಿ ಹಂಚ್ಕೊಬೇಕು ಅಂತ ಅಲ್ಲಿ ಕಲಿತೆ.
- ಪೂರ್ಣಶ್ರೀ ಎಸ್

Poorna Shivananjaiah, has been a part of the Dhrushya Family since 2014 and is Currently working as Assistant Engineer at Mysore City Corporation.
Art by Samruddhi Gowda. You can check her artwork in her page, here.
Comments