ಪುಟ ನಾಲ್ಕು: ನಾಟಕದಲ್ಲಾದ ಅನುಭವ
- ranjitha
- May 7, 2022
- 1 min read
Updated: May 8, 2022
ಉದ್ವಸ್ತ, ರಕ್ತ ಧ್ವಜ ಈ ಎರಡು ನಾಟಕಗಳಲ್ಲಿ ನಾನು ನಟಿಸಿದ್ದೇನೆ. ದೃಶ್ಯ ರಂಗ ತಂಡಕ್ಕೆ ಬಂದಾಗ ನಾಟಕದ ಬಗ್ಗೆ ಒಂಚೂರು ಅರಿವಿರಲಿಲ್ಲ ನನಗೆ, ಕೇವಲ ಸಿನಿಮಾದಲ್ಲಿ ನಾಟಕ ಪ್ರದರ್ಶನವನ್ನು ನೋಡಿದ್ದೆ ನಿಜವಾಗಿ ನಾಟಕವನ್ನು ಎಂದೂ ನೋಡಿರಲಿಲ್ಲ. ಆದರೆ ದೃಶ್ಯ ತಂಡಕ್ಕೆ ಹೋಗಿ ಕೇವಲ ಐದು ದಿನಗಳಲ್ಲಿ ಒಂದು show ಇದೆ ಎಂದು ಹೇಳಿದರು ಮೊದಲು ರಂಗಮಂದಿರವನ್ನು ಪ್ರವೇಶಿಸಿದ ಅಂದು ತುಂಬಾ ಭಯವಿತ್ತು , ಅಂತೆಯೇ ತುಂಬಾ ಆಸಕ್ತಿಯಿಂದ ರಕ್ತ ಧ್ವಜ ನಾಟಕವನ್ನು ಮಾಡಲು ಮುಂದಾದೆ ನನ್ನ ಪಾತ್ರದಲ್ಲಿ ಅಷ್ಟೇನೂ ಮಾತನಾಡುವಂತಹದಿರಲಿಲ್ಲ ಆದರೂ, ನನಗೆ ಬೇಕಾದ ವಸ್ತುವನ್ನು ನಾನು ಮರೆತು ಹೋಗಿದ್ದೆ ವೇದಿಕೆಯಲ್ಲಿ ಸ್ವಲ್ಪ-ಸ್ವಲ್ಪ ಭಯದಲ್ಲೇ ಆ ಪಾತ್ರವನ್ನು ನಿರ್ವಹಿಸಿದೇ ಪಾತ್ರ ಮುಗಿದನಂತರ ಅತ್ಯಂತ ಸಂತೋಷ ನನದಾಗಿತ್ತು . ರಕ್ತ ಧ್ವಜ ನಾಟಕದಲ್ಲಿ ಭಾಗವಹಿಸಿದ ನಂತರ ಸ್ವಾತಂತ್ರ್ಯ ಪಡೆದುಕೊಳ್ಳಲು ಆಗಿನ ಕಾಲದಲ್ಲಿ ಮಾಡಿದ ಹೋರಾಟ ಅವರಲ್ಲಿದ್ದ ಕಿಚ್ಚು ಹಾಗೂ ಕಿಶನ್ ನ ದೇಶಪ್ರೇಮ,

ಈಸೂರಿನ ದಂಗೆಯ ಸ್ವಾತಂತ್ರ್ಯದ ಕಿಡಿ ಒಂದಕ್ಕೊಂದು ಎಷ್ಟು ಅರ್ಥಪೂರ್ಣವಾಗಿದೆ ಎಂದರೆ, ಆ ನಾಟಕವನ್ನು ಮಾಡಿದ ನಾವು ಪುಣ್ಯವಂತರು ಹಾಗು ನಮ್ಮೆಲ್ಲರ ಒಳ್ಳೆಯ ಭವಿಷ್ಯಕ್ಕಾಗಿ ಅಂದು ನಮಗಾಗಿ ಪ್ರಾಣಬಿಟ್ಟು ಹೋರಾಟಗಾರರ ದೇಶಪ್ರೇಮಕ್ಕೆ ನಾವಿಂದು ಋಣಿಯಾಗಿರಬೇಕು ನಮ್ಮ ನಾಟಕದ ಮೂಲಕ ನಾವು ಈಸೂರಿನ ದಂಗೆಯ ಕತೆಯನ್ನು ಜನರಿಗೆ ತಲುಪಿಸುವ ಚಿಕ್ಕ ಪ್ರಯತ್ನ ಮಾಡಿರುವುದು ನಿಜಕ್ಕೂ ಖುಷಿಯ ಸಂಗತಿ.
ರಂಜಿತಾ ಜೆ ಮೂರ್ತಿ, Dhrushya
Comments