google788439879b616bdb.html
top of page

ಪ್ರಸಂಗ 10: ದೃಶ್ಯ “ಸಾಧ್ಯತೆಗಳ ಸುಪ್ತಗಣಿ”


ನಮ್ಮ ನಿರ್ದೇಶಕಿ ದಾಕ್ಷಾಯಿಣಿ ಭಟ್ ಅವರಿಗೆ “ಉಸ್ತಾದ್ ಬಿಸ್ಮಿಲ್ಹಾ ಖಾನ್ ಯುವ ಪ್ರಶಸ್ತಿ” ಬಂದಹೊತ್ತಲ್ಲಿ ತಂಡದಲ್ಲಿ ಎಲ್ಲರಿಗೂ ತುಂಬು ಸಂತೋಷ. ಈ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಅವರು ನಿರ್ದೇಶಿಸಿದ ಒಂದು ನಾಟಕವನ್ನು ಪ್ರದರ್ಶನ ಮಾಡಬೇಕಾಗಿತ್ತು. ಆಗ ಅಗ್ನಿವರ್ಣ ನಾಟಕ ಪ್ರದರ್ಶನ ಮಾಡಲು ತಂಡದಲ್ಲಿ ತೀರ್ಮಾನವಾಯಿತು. ಆದರೆ ಒಂದು ತೊಂದರೆ ಎಂದರೆ, ಹಿಂದಿನ ಪ್ರದರ್ಶನದಲ್ಲಿ ಇದ್ದ ಹಲವಾರು ನಟರು ಇರದ ಕಾರಣ ಕೆಲವು ಹೊಸ ನಟರನ್ನು ಆಯ್ಕೆಮಾಡಿಕೊಳ್ಳುವುದರೊಂದಿಗೆ ಹಳಬರು ಕೆಲವರು ಎರಡುಮೂರು ಪಾತ್ರಗಳನ್ನು ಮಾಡಬೇಕಾಯಿತು ಅದರಲ್ಲಿ ನಾನು ಒಬ್ಬಳು. ಈ ಮೊದಲು ನಾನು ಮಾಡಿದ ಪಾತ್ರಗಳೆಲ್ಲವೂ ಹುಡುಗ, ಹಸು, ಕೊತ್ವಾಲ, ಇತ್ತ್ಯಾದಿ.. . ನಯ-ನಾಜೂಕು ಹೆಣ್ಣಿನ ಯಾವ ಪಾತ್ರಗಳನ್ನೂ ನಾನು ಅದುವರೆಗೆ ಮಾಡಿರಲಿಲ್ಲ. ಆದರೆ ಈ ಸಂದರ್ಭದಲ್ಲಿ ನನಗೆ ದೊರತದ್ದು ಶೃಂಗಾರ ಪ್ರಧಾನವಾದ ರಾಣಿ ಇಂದುಮತಿಯ ಪಾತ್ರ, ಈ ಪಾತ್ರವನ್ನು ನೃತ್ಯಾಭಿನಯದ ಮೂಲಕ ಕಟ್ಟಿಕೊಡಲಾಗಿತ್ತು. ನನಗೋ ಹುಡುಗಿಯರ ರೀತಿ ನಡೆಯುವುದು ಕಷ್ಟ, ಆದರೆ ಇದರಲ್ಲಿ ರಂಗ ಚಲನೆಯನ್ನು ಹಂಸ ನಡಿಗೆಯಲ್ಲಿ ನಡೆಯುತ್ತ ಅಭಿನಯಿಸಬೇಕಾದ ಕಾರಣ ನನಗೆ ಎರಡು ವಾರಗಳವರೆಗೆ ಈ ನಡಿಗೆಯನ್ನು ಅಭ್ಯಾಸ ಮಾಡಿಸಿದರು. ಕಡೆಗೂ ಈ ನಾಟಕದ ಪಾತ್ರವನ್ನು ಮಾಡಿದೆ. ಇಲ್ಲಿನ ಸತತವಾದ ತಾಲೀಮು, ನಿರಂತರ ಪ್ರಯೋಗಗಳು, ನಮಗೆ ಹೊಸತರಹದ ಪಾತ್ರಗಳನ್ನು ಕೊಟ್ಟು ನಾನು ಅಸಾಧ್ಯ ಅಂದುಕೊಂಡದ್ದನ್ನೆಲ್ಲ ಸಾಧ್ಯವೆಂದು ಸಾಕ್ಷೀಕರಿಸಿದೆ.


Triveni Vasishta has been a part of Dhrushya since 2013 and has been contributing to Theatre ever since. Currently she is pursuing her masters in commerce from Jain University.

She is also a nationally recognized volleyball player.




Art by Sammruddhi Gowda. Click here to check out her art

Comments


Subscribe Form

© 2023 by Dhrushya Rangatanda. 

bottom of page