ಪ್ರಸಂಗ 4: "ವಿಕಸನವ ನೀರೆರೆದು ಪೊರೆದ ದಿನಗಳು."
- Dhrushya
- Oct 3, 2020
- 1 min read

"ನೆಲೆದ ಗರ್ಭವನ್ನ ಸೀಳ್ತೀರಿ. ಅದರೊಳಗಿಂದ, ಯುಗಯುಗಾಂತರಗಳಲ್ಲಿ ಸತ್ತ ಸಂಪತ್ತನ್ನ ಎತ್ತಿ ಹೊರ ತರ್ತೀರಿ…….". ಕೆಂಪುಕಣಗಿಲೆಯ ಮೊದಲ ದೃಶ್ಯದಲ್ಲಿ ಬರುವ ಡೈಲಾಗು. ಅಂದು ರಿಹರ್ಸಲ್ ಶುರುಮಾಡಿ ಈ ಡೈಲಾಗ್ ಸಮೀಪಿಸುವ ಹೊತ್ತಿಗಾಗಲೇ ಮಳೆಯೂ ಅವಸರದಿಂದ ತನ್ನ ಡೈಲಾಗ್ ಹೇಳಲು ಶುರುಮಾಡಿತ್ತು.
ರಿಹರ್ಸಲ್ ಶುರುವಾಗಿದೆ. ನಿಲ್ಲಿಸೋದು ಸಲ್ಲ. ಗಾಳಿಮಳೆಯ ಜೊತೆ ನಮ್ಮ ಸ್ಪರ್ಧೆ ಶುರುವಾಯ್ತು. ಒಂದು ಡೈಲಾಗ್, ಒಂದು ಗುಡುಗು, ಇನ್ನೊಂದು ಡೈಲಾಗ್, ಮತ್ತೆ ಗಾಳಿ, ಡೈಲಾಗ್... ಮಿಂಚು...ಸಿಡಿಲು ಹೀಗೆ. ಅಭ್ಯಾಸ ಮಾಡ ಮಾಡುತ್ತಲೇ ಎಲ್ಲರೂ ತೊಯ್ದು ತೊಪ್ಪೆ.
ಅವತ್ತು ಅದೇ ಗಾಳಿಯ ಗಲಾಟೆಯಲ್ಲೇ ಒಂದು ಮುಕ್ಕಾಲು ಗಂಟೆಯ ಪ್ರಾಕ್ಟೀಸ್ ಮುಗಿಸಿದ್ದೆವಲ್ಲ!!!... ಅದೊಂದು ಸಾರ್ಥಕ ದಣಿವು ನಮ್ಮ ರಿಹರ್ಸಲ್ ಗೆ ಬೆಚ್ಚಗಿನ 4 ಗೋಡೆಗಳಿಲ್ಲ ಅದು ಮನೆ ಜಗಲಿಯಲ್ಲಿ ಕೂತು ಅಭ್ಯಸಿಸುವಂತೆ ಒಂದು ವಿಶೇಷ ಅನುಭೂತಿ ಕೊಡೋ ಜಾಗ. ಗಾಳಿಯೇ ನಮ್ಮ ಗೋಡೆ ಅಲ್ಲಿ. ಅವತ್ತು ಅಲ್ಲೇ, ಅದೇ ಜಗುಲಿ ನನ್ನೊಳಗೆ ಕೆಲವು ಮೂಲ್ಯ ಚಿಂತನೆಗಳ ಬೀಜ ಬಿತ್ತಿತು.
'ಇಡೀ ರಿಹರ್ಸಲ್ place ; ಅಂದು ನೀರು ನುಗ್ಗಿ... ಅಸ್ತವ್ಯಸ್ತವಾದರೂ ನಮ್ಮ ಪ್ರಾಕ್ಟೀಸ್ ಯಾಕೆ ನಿಲ್ಲಲಿಲ್ಲ..?...
(ಉತ್ತರ ಅಲ್ಲೇ ಇತ್ತು...) ದೃಶ್ಯ ಕಲಿಸೋದು ಕೆಲಸದ ಮೇಲಿನ ಏಕಾಗ್ರತೆ' ತೊಡಕುಗಳನ್ನೂ ಅವಕಾಶದ ಮೆಟ್ಟಿಲಾಗಿಸಿಕೊಳ್ಳಲು ದೃಶ್ಯ ನಮಗರಿವಿಲ್ಲದೆ ಕಲಿಸಿತ್ತು. ಇಂದಿಗೂ ಇದೇ ಸಿದ್ಧಾಂತ ದೃಶ್ಯದ ದಿನಗಳನ್ನು ಅರ್ಥಪೂರ್ಣವಾಗಿಸಿದೆ.
- ವಿಭಾ ಡೋಂಗ್ರೆ, ಶೃಂಗೇರಿ

Vibha Dongre has been a part of the Dhrushya Family since 2015 and has been actively contributing to theatre in various capacities ever since.
she is currently working as a lecturer in journalism @Kateel Ashok Pai Memorial College, Shivamogga.
Comments